❇️Notes for PC/PSI exams 👮♂
ಕರ್ನಾಟಕವನ್ನು ಆಳಿದ ರಾಜಮನೆತನಗಳು..
🟡 ಮೌರ್ಯರು 🔴
➤ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.
ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳ ಗಳಲ್ಲಿ ಕಂಡು ಬಂದಿವೆ.
➤ ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹು ವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳ ದಲ್ಲಿ ಬಂದು ನೆಲೆಸಿದ್ದನು.
➤ ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.
➤ ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
➤ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ.
➤ ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ.
➤ ಗುಲ್ಬರ್ಗಾ ಜಿಲ್ಲೆಯ ಸನ್ನತಿ.
➤ ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ
🟡 ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) 🔴
➤ ಮೌರ್ಯರ ಸಾಮಂತ ರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.
➤ ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.
➤ ಇವರ ಲಾಂಛನ : ವರುಣ.
➤ ಇವರೇ ಕ್ರಿ.ಶ 78 ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
➤ ಶಾತವಾಹನರ ಮೂಲ ಪುರುಷ : ಸಿಮುಖ.
➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
➤ ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.
🟡 ಬನವಾಸಿಯ ಕದಂಬರು (ಕ್ರಿ.ಶ 345 - 540) 🔴
➤ ಈ ಸಂತತಿಯ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360)
➤ ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
➤ ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
➤ ಇವರ ಲಾಂಛನ : ಸಿಂಹ.
➤ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.
➤ ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.
➤ ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.
🟡 ತಲಕಾಡಿನ ಗಂಗರು (ಕ್ರಿ.ಶ 350- 999) 🔴
➤ ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
➤ ಈ ಸಂತತಿಯ ಮೊದಲ ದೊರೆ : ದಡಿಗ (350 -400)
➤ ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ
➤ ಇವರ ಎರಡನೆಯ ರಾಜಧಾನಿ : ತಲಕಾಡು
➤ ಇವರ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ
➤ ಇವರ ಲಾಂಛನ : ಆನೆ(ಮದಗಜ)
➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ದುರ್ವಿನೀತ (540-600)
➤ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
➤ ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.
🟡 ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) 🔴
➤ ಈ ಸಂತತಿಯ ಸ್ಥಾಪಕ : ಜಯಸಿಂಹ
➤ ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಾಗಲಕೋಟೆ ಜಿಲ್ಲೆಯಲ್ಲಿದೆ)
➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)
➤ ಇವರ ರಾಜ ಲಾಂಛನ : ವರಹ.
➤ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.
➤ ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.
🟡 ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540) 🔴
➤ ಈ ಸಂತತಿಯ ಸ್ಥಾಪಕ : ದಂತಿದುರ್ಗ
➤ ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡ ವಾಗಿತ್ತು.
➤ ಇವರ ಲಾಂಛನ : ಗರುಡ
➤ ಈ ಸಂತತಿಯ ಅತ್ಯಂತ ಹೆಸರಾಂತ ದೊರೆ : ಅಮೋಘವರ್ಷ ನೃಪತುಂಗ (814-878)
➤ ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.
🟡 ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200) 🔴
➤ ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
➤ ಇವರ ರಾಜಧಾನಿ : ಕಲ್ಯಾಣ
➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
➤ 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.
🟡 ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183) 🔴
➤ ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿ ಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
➤ ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳ ನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.
🟡 ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346) 🔴
➤ ಈ ಸಂತತಿಯ ಮೂಲ ಪುರುಷ : ಸಳ.
➤ ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)
➤ ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.
🟡 ವಿಜಯನಗರ ಸಾಮ್ರಾಜ್ಯ (ಕ್ರಿ.ಶ 1336 - 1565) 🔴
➤ ವಿದ್ಯಾರಣ್ಯ ರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
➤ ಇವರ ರಾಜಧಾನಿ : ಹಂಪಿ
➤ ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
➤ 1565 ರ ತಾಳೀಕೋಟೆ ಯುದ್ಧ ದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.
🟡 ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527) 🔴
➤ ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
➤ ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.