ಕರ್ನಾಟಕ ಏಕೀಕರಣ
ಕನ್ನಡಿಗರನ್ನು ಬೇರೆ ಭಾಷಿಕರು, ಅವರ ಆಡಳಿತಗಳು ನಿರ್ಲಕ್ಷ್ಯ ಮಾಡಿದವು. ಕನ್ನಡ ಭಾಷೆ, ಸಂಸ್ಕೃತಿ ಅಸ್ತಿತ್ವಕ್ಕೆ ತೊಂದರೆಗಳು ಬಂದವು. ಹತ್ತೊಂಬತ್ತನೆ ಶತಮಾನದ ಕೊನೆಗೆ ಕನ್ನಡ-ಕನ್ನಡಿಗರ ಮೇಲೆ ದಬ್ಬಾಳಿಕೆ ಹೆಚ್ಚಿತು. ಹೊಸ ಶಿಕ್ಷಣ ಪದ್ಧತಿಯಲ್ಲಿ ಕಲಿತ ಕನ್ನಡಿಗರು ತಾವೆಲ್ಲ ಒಂದಾಗದಿದ್ದರೆ ಬೇರೆ ದಾರಿ ಇಲ್ಲವೆಂಬುದನ್ನು ಅರಿತು ಒಂದೇ ಆಡಳಿತದಲ್ಲಿ ಒಗ್ಗಟ್ಟಾಗಿ ನೆಲೆಸಲು ಒಂದುಗೂಡಿ ಹೋರಾಡಿ ಏಕೀಕರಣದ ಯಶಸ್ಸು ಪಡೆದರು.
1799ರಲ್ಲಿ ಟಿಸ್ಪೂವಿನ ಮರಣಾನಂತರ ಬ್ರಿಟಿಷರು, ಕನ್ನಡ ನಾಡನ್ನು ಮೂರು ಭಾಗವನ್ನಾಗಿ ಮಾಡಿದರು. ಟಿಪ್ರೊವಿನ ಮೇಲಿನ ಯುದ್ಧದಲ್ಲಿ ಆಗಿದ್ದ ಒಪ್ಪಂದದಂತೆ ಬ್ರಿಟಿಷರು ಹೈದರಾಬಾದಿನ ನಿಜಾಮ ಮತ್ತು ಮರಾಠರಿಗೂ ಕರ್ನಾಟಕ ರಾಜ್ಯದಲ್ಲಿ ಪಾಲು ನೀಡಬೇಕಾಗಿತ್ತು. ಒಂಬತ್ತು ಜಿಲ್ಲೆಗಳಿಂದ ಕೂಡಿದ ಹಳೆಯ ಮೈಸೂರು ಸಂಸ್ಥಾನವನ್ನು ಮೈಸೂರು ಅರಸರಿಗೂ, ಈಶಾನ್ಯ ಭಾಗದ ಕನ್ನಡ ತೆಲುಗು, ಮರಾಠಿ, ಉರ್ದು ಭಾಷಿಕ ಪ್ರದೇಶಗಳಾದ ರಾಯಚೂರು, ಕಲಬುರ್ಗಿ, ಲಿಂಗಸೂಗೂರು, ಬೀದರ್, ಉಸ್ಮಾನಾಬಾದ್ ಪ್ರದೇಶಗಳನ್ನು ಹೈದರಾಬಾದ್ ನಿಜಾಮರಿಗೂ ಹಂಚಿಕೆ ಮಾಡಿದರು. ದಕ್ಷಿಣ ಕನ್ನಡ, ಬಳ್ಳಾರಿ, ನೀpio, ಕೊಳ್ಳೇಗಾಲ, ಹೊಸೂರು ಪ್ರದೇಶಗಳನ್ನು ತಮ್ಮದೇ ಆದ ಮದ್ರಾಸ್ ಸರ್ಕಾರಕ್ಕೂ ಸೇರಿಸಿಕೊಂಡರು, ಕೊಡಗಿನ ಅರಸರ ಪತನದ ನಂತರ ಕೊಡಗುರಾಜ್ಯವು ಸಹ ಬ್ರಿಟಿಷರಿಗೆ ಸೇರಿತು. ಅದಕ್ಕೆ ಅವರು ಪ್ರತ್ಯೇಕ ರಾಜ್ಯದ ಸ್ಥಾನ ನೀಡಿದರು. ತುಂಗಭದ್ರಾ ನದಿಯ ಉತ್ತರಕ್ಕಿದ್ದ ಕರ್ನಾಟಕದ ಬಹುಭಾಗ ಮರಾಠಾ ಪೇಕ್ಷೆಗಳಿಗೆ ದೊರೆಯಿತು. ಕ್ರಿ.ಶ.1818ರವರೆಗೆ ಮರಾಠಾ ಪೇಶ್ವಗಳೇ ಈ ಪ್ರದೇಶವನ್ನು ಆಳುತ್ತಿದ್ದರು, ಆದರೆ ಸೇಶೆಗಳ ಆಡಳಿತ ಕೊನೆಗೊಂಡಾಗ, ಅವೆಲ್ಲವೂ ಬ್ರಿಟಿಷರ ವಶವಾಗಿ ಮುಂಬಯಿ ಪ್ರಾಂತ್ಯಕ್ಕೆ ಸೇರಿದವು. ಈ ಪ್ರದೇಶದಲ್ಲಿ ಬ್ರಿಟಿಷರು X1ರ ಹೊತ್ತಿಗೆ ಧಾರವಾಡ, ಬಿಜಾಪುರ, ಬೆಳಗಾವಿ, ಕನ್ನಡ (ಉತ್ತರ ಕನ್ನಡ) ಜಿಲ್ಲೆಗಳನ್ನು ರಚಿಸಿ, ತಮ್ಮದೇ ಆದ ಮುಂಬಯಿ ಪ್ರಾಂತಕ್ಕೆ ಸೇರಿಸಿಕೊಂಡರು. ಕರ್ನಾಟಕದ ಉತ್ತರ ಭಾಗದಲ್ಲಿ ಇದ್ದ ಅನೇಕ ಸಣ್ಣ ಸಣ್ಣ ಕನ್ನಡದ ಸಂಸ್ಥಾನಗಳ ಆಡಳಿತವನ್ನು ಮರಾಠಿ ಸಂಸ್ಥಾನಿಕರಿಗೇ ವಹಿಸಿದರು. ಈ ಸಂಸ್ಥಾನಗಳಲ್ಲಿ ಕನ್ನಡ ಭಾಷಿಕರೇ ಬಹುಸಂಖ್ಯಾತರಾಗಿದ್ದರು. ಆದರೆ ಆಳ್ವಿಕೆ ನಡೆಸುವ ಸಂಸ್ಥಾನಿಕರಲ್ಲಿ ಹೆಚ್ಚಿನವರು ಮರಾಠರೇ ಆಗಿದ್ದರು. ಮರಾಠಿ ಮತ್ತು ಬ್ರಿಟಿಷ್ ಅಧಿಕಾರಿಗಳು ಆಡಳಿತ ಸೂತ್ರ ಹಿಡಿದಿದ್ದರು. ಹೀಗಾಗಿ ಅವರು ಕನ್ನಡವನ್ನು ಕಡೆಗಣಿಸಿ ಸರ್ಕಾರದ ವ್ಯವಹಾರಗಳಲ್ಲಿ, ವಿದ್ಯಾಭಾಸದಲ್ಲಿ ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಿದರು. ಜನರೂ ಗತ್ಯಂತರವಿಲ್ಲದೆ ಮರಾಠಿ ಕಲಿಯಬೇಕಾಯಿತು. ಇದರಿಂದ ಉತ್ತರ ಭಾಗದಲ್ಲಿ ಮರಾಠಿಯೂ, ಹಳೆಯ ಮೈಸೂರು ಸಂಸ್ಥಾನದಲ್ಲಿ ಕನ್ನಡ ಭಾಷೆಯೂ ಉಳಿದು ಬೆಳೆಯಲು ಕಾರಣವಾಯಿತು.
Tags
ಕರ್ನಾಟಕ ಏಕೀಕರಣ